Archive for April, 2012

ಧರೆಯಂಬರದ ವಿರಹವ
ಸೋನೆ ಮಳೆಯು ಅಳಿಸಿದಂತೆ….
ಜೋಡಿ ಜೀವಗಳ ವಿರಹವ
ಮುಗ್ಧ ಮಾತುಗಳು ತಣಿಸಿವೆ !!

Just like how the first rain erases off the pain of the seperation between the earth and sky, the innocent talks between the dual hearts have quenced the pain of seperation between them

ದೇಗುಲದ ಗೋಪುರವ
ಕಲಶಾಲಂಕರಿಸಿದಂತೆ …..
ಪ್ರೀತಿ ಎಂಬ ಗೋಪುರವ
ಪ್ರೇಮ ಪಾರಿವಾಳಗಳು ಚುಂಬಿಸಿವೆ !!

Just like how the kalasha would add to the beauty of a gopura of a temple, the lover birds have kissed the gopura of the monument called Love.

ಪ್ರೇಮ ಸಂಬಂಧಿಗಳು

ಪ್ರೀತಿ
ಚಟವಾಗಿ..
ಮತ್ತಾಗಿ…
ಹೃದಯವೇರಿ ಕೂತಾಗ…
ಮಾತೆಲ್ಲ ಅಪಾರ..
ಮನಸೆಲ್ಲ ಝೇಂಕಾರ !
————
ಅನುರಾಗ
ನೀರಾಗಿ…
ಭರವಾಗಿ…
ನದಿಯಂತೆ ಹರಿದಾಗ …
ಕಾಲ ಉರುಳೋ ಅರಿವಿಲ್ಲ..
ಅರಿವು ಮರಳೋ ಸ್ಥಿತಿಯಿಲ್ಲ !
-Abhishek S N